ನಂಜನಗೂಡು ಹಲ್ಲಿನ ಪುಡಿ

Blogs, View all 5 comments

ನಂಜನಗೂಡು ಮೂಲದ ಬಿ.ವಿ.ಪಂಡಿತರು ಬರೀ ಹಲ್ಲಿನ ಪುಡಿ ಒಂದೇ ಅಲ್ಲ, ಹಲವಾರು ಆಯುರ್ವೇದದ ಔಷಧಿ, ಉತ್ಪನ್ನಗಳನ್ನು ತಯಾರಿಸಿದ್ದಾರೆ. ಅದಷ್ಟೇ ಅಲ್ಲದೇ ಸದ್ವೈದ್ಯ ಶಾಲೆಯನ್ನೂ ಸ್ಥಾಪಿಸಿದ್ದಾರೆ. 1918ರಲ್ಲಿ ಫ್ಲ್ಯೂ ಜ್ವರ ತೀವ್ರವಾಗಿದ್ದಾಗ ಪಂಡಿತರು ತಯಾರಿಸಿದ ಕಸ್ತೂರಿ ಮಾತ್ರೆ ತುಂಬಾ ಪ್ರಸಿದ್ಧವಾಗಿತ್ತು. ನಂಜನಗೂಡಿನಲ್ಲಿ ಇಪ್ಪತ್ತು ವರ್ಷ ಟೆನ್ನಿಸ್ ಕ್ಲಬ್ ನಡೆಸಿದ ಪಂಡಿತರು ಸ್ವತಃ ಒಳ್ಳೆಯ ಫುಟ್ಬಾಲ್ ಆಟಗಾರರಾಗಿದ್ದರು. ಮನೆಯ ಬಡತನ ಸಂದಿಗ್ಧಗಳು ಅವರನ್ನು ಹೊಸದೊಂದು ಉದ್ಯಮ ಶುರುಮಾಡುವಂತಾ ಪರಿಸ್ಥಿತಿಗೆ ತಳ್ಳಿದವು. 1913ರ ಫೆಬ್ರವರಿ ತಿಂಗಳಿನಲ್ಲಿ ನಂಜನಗೂಡಿನ ನಾರಾಯಣ ಅಗ್ರಹಾರದ ತಮ್ಮ […]

View Post

ಮಂಗಳೂರಿನ ಹೆಂಚುಗಳು

Blogs, View all 2 comments

ಮಂಗಳೂರಿನ ಹೆಂಚುಗಳು ಸ್ವಾತಂತ್ರ್ಯ ಪೂರ್ವದಿಂದಲೂ ಹೆಸರುವಾಸಿಯಾಗಿವೆ. ಬ್ರಿಟೀಷರೂ ಈ ಹೆಂಚಿಗೆ ಮಾರುಹೋಗಿದ್ದರು. ಮುಂಬಯಿಯ ವಿಕ್ಟೋರಿಯಾ ಟರ್ಮಿನಲ್, ಚರ್ಚ್‌ಗೇಟ್‌ಗಳಲ್ಲಿ ಬಳಸಿದ್ದು ಇದೇ ಮಂಗಳೂರಿನ ಹೆಂಚುಗಳನ್ನು. ದೇಶಾದ್ಯಂತ ಈ ಹೆಂಚು ತಿರುಗಾಡಿದ್ದಲ್ಲದೇ ಯುರೋಪ್, ಆಫ್ರಿಕಾ ಖಂಡಗಳಿಗೂ ಈ ಹೆಂಚುಗಳು ರಫ್ತಾಗುತ್ತಿದ್ದವು. 1970ರ ಹೊತ್ತಿಗೆ 43 ಹೆಂಚಿನ ಉದ್ಯಮಗಳಿದ್ದು ಸಾವಿರಾರು ಜನರಿಗೆ ಉದ್ಯೋಗ ನೀಡಿತ್ತು. 1860ರಲ್ಲಿ ಉಳ್ಳಾಲ ಸೇತುವೆಯಿಂದ 100 ಮೀಟರ್ ದೂರದಲ್ಲಿ ಜರ್ಮನ್ ಮಿಶನರೀಸ್ ಬ್ಯಾಸೆಲ್ ಮಿಷನ್ ಟೈಲಿಂಗ್ ವರ್ಕ್ಸ್ ಎಂಬ ಹೆಸರಿನೊಂದಿಗೆ ಮೊದಲು ಹೆಂಚು ನಿರ್ಮಾಣ ಸಂಸ್ಥೆ ಶುರುವಾಯಿತು. […]

View Post

ದಾವಣಗೆರೆ ಬೆಣ್ಣೆ ದೋಸೆ

Blogs, View all 3 comments

ಚಾಲುಕ್ಯರು ಆಳಿದ ಪ್ರದೇಶದಲ್ಲಿ ಸುತ್ತಾಟಕ್ಕೆಂದು ಬಂದಾಗ ದಣಿವಾರಿಸಿಕೊಳ್ಳಲು ಕೆರೆಯೊಂದನ್ನು ಕಟ್ಟಿದರು. ಆ ಕೆರೆಗೆ ದಣಿವಿನ ಕೆರೆಯೆಂದು ಹೆಸರು ಕೊಟ್ಟರು ಅದೇ ದಾವಣಗೆರೆಯಾಯ್ತು ಎಂದು ಹೇಳುವವರಿದ್ದಾರೆ. ದೇವನಗರಿ ಎಂಬ ಹೆಸರು ಬಾಯಿಂದ ಬಾಯಿಗೆ ಹಬ್ಬಿ ದಾವಣಗೆರೆ ಆಯ್ತು ಎಂದು ಹೇಳುವವರೂ ಇದ್ದಾರೆ. ಕರ್ನಾಟಕದ ಕೇಂದ್ರಬಿಂದುವಾಗಿ 1870ರಲ್ಲಿಯೇ ಪುರಸಭೆಯ ಸ್ಥಾನ ಪಡೆದಿದ್ದು ದಾವಣಗೆರೆ. ಒಂದು ಕಾಲದ ಮಾಂಚೆಸ್ಟರ್ ಆಫ್ ಕರ್ನಾಟಕ ಎಂದು ಖ್ಯಾತಿ ಪಡೆದ ಊರು. 1928ರಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬೀಡ್ಕಿ ಗ್ರಾಮದ ಚೆನ್ನಮ್ಮ ಅನ್ನುವವರು ದಾವಣಗೆರೆಗೆ […]

View Post

ಶಹಬಾದ್ ಕಲ್ಲುಗಳು

Blogs, Leave a comment

ಗುಲ್ಬರ್ಗಾ ಜಿಲ್ಲೆಯ ಸರಿಸುಮಾರು 3200 ಚದರ್ ಕಿಲೋಮೀಟರ್‌ಗಳಷ್ಟು ಭೂಪ್ರದೇಶದಲ್ಲಿ ಸುಣ್ಣದ ಕಲ್ಲು ಅಥವಾ ಶಹಬಾದ್ ಕಲ್ಲು ಲಭ್ಯ ಇವೆ. ಜಿಲ್ಲೆಯ ಚಿತ್ತಾಪುರ, ವಾಡಿ, ಶಹಬಾದ್, ಚಿಂಚೋಳಿ, ಜೇವರ್ಗಿ, ಸೇಡಂ ತಾಲ್ಲೂಕು, ವಿವಿಧ ಹೋಬಳಿಗಳು ಶಹಬಾದ್ ಕಲ್ಲು ಸಿಗುವ ಪ್ರಮುಖ ಜಾಗಗಳು. ಒಂದು ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಕಲ್ಲಿನ ಗಣಿಗಳಿದ್ದು ನೂರಾರು ಕೋಟಿ ರೂಪಾಯಿ ವ್ಯವಹಾರವನ್ನು ಮಾಡುವುದಲ್ಲದೇ ಹಲವರಿಗೆ ಉದ್ಯೋಗವನ್ನೂ ತಂದುಕೊಡುತ್ತದೆ. ಸುಣ್ಣದ ಕಲ್ಲುಗಳಲ್ಲದೇ ರೆಡ್ ಅಕರ್, ಪುಲ್ಲರ್ಸ್ ಅರ್ಥ್, ಜೇಡಿ ಮಣ್ಣು, ಕ್ವಾರ್ಟ್ಸ್ ಎಂಬ […]

View Post

ಮದ್ದೂರ್ ವಡೆ

Blogs, Leave a comment

ಈ ತಿನಿಸು ಹುಟ್ಟಿದ್ದು ಒಂದು ಒತ್ತಡದ ಸನ್ನಿವೇಶದಲ್ಲಿ. ಒಂದು ಧಾವಂತದ ವಾತಾವರಣದಲ್ಲಿ. ಎಷ್ಟೋ ಸಲ “ಝಟ್ ಪಟ್” ಅಡುಗೆಗಳು ಬಹಳ ಚೆನ್ನಾಗಿರುತ್ತವೆಂಬುದಕ್ಕೆ ‘ಮದ್ದೂರ್ ವಡೆ’ ಒಂದು ಸ್ಪಷ್ಟ ನಿದರ್ಶನ. ಇದು ಹುಟ್ಟಿದ್ದಂತೂ ಮದ್ದೂರಲ್ಲೇ. 1881 ರಲ್ಲಿ. ಮದ್ದೂರ್ ಬಳಿಯ ರೈಲ್ವೇಸ್ಟೇಷನ್ನಿನ ಕ್ಯಾಂಟೀನಿನಲ್ಲಿ. ಆ ಕ್ಯಾಂಟೀನಿದ್ದುದು ಉಡುಪಿಯ ಅಡುಗೆಯ ಆಚಾರ್ಯರೊಬ್ಬರ ಸುಪರ್ದಿಯಲ್ಲಿ. ಪ್ರತಿನಿತ್ಯ ಅವರು ಮಾರುತ್ತಿದ್ದ ಬೈಟೂ ಬೆಲ್ಲದಕಾಫಿ ಹಾಗು ಮಂಗಳೂರು ಬೋಂಡಗಳು ಪ್ರಯಾಣಿಕರ ನಾಲಿಗೆಯ ಚಪಲಕ್ಕೂ ಹಸಿವಿಗೂ ಔಷಧವೆನಿಸಿತ್ತು. ಒಂದು ದಿನ ಟ್ರೈನ್ ಬರೋ ಟೈಮಿಗೆ ಸರಿಯಾಗಿ […]

View Post

ಬಾದಾಮಿ ವಿಭೂತಿ

Blogs, Leave a comment

“ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುಳ್ಳಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗಾದೆಯೋ ಎಲೆ ಮಾನವ” ಅನ್ನುವ ಸಾಲುಗಳು ಯಾರಿಗೆ ಗೊತ್ತಿಲ್ಲ ಹೇಳಿ. ಭಗವದ್ರೂಪವಾದ ಗೋವಿನ ಸಗಣಿಯಿಂದ ತಯಾರಿಸಿದ ವಿಭೂತಿ ಭಗವಂತನ ನೊಸಲ ಮೇಲೆ ರಾರಾಜಿಸೋದು ಎಷ್ಟು ಚೆನ್ನ ಅಲ್ಲವೇ? ಇದರಲ್ಲಿ ಮೂರು ಪ್ರಕಾರಗಳಿವೆ. ಕ್ರಿಯಾ ಭಸ್ಮ, ಸಾದಾ ಭಸ್ಮ ಹಾಗೂ ಕಲ್ಪ ಭಸ್ಮ. ಸಾದಾ ಭಸ್ಮ ಎಲ್ಲೆಡೆ ತಯಾರಾಗುತ್ತದೆ. ಕಲ್ಪ ಭಸ್ಮ ಎಲ್ಲಿಯೂ ತಯಾರಾಗುವುದಿಲ್ಲ. ಮೊದಲು ಸ್ವಾಮಿಗಳು ತಯಾರಿಸುತ್ತಿದ್ದರು. ಸಗಣಿ ಭೂಮಿಗೆ ಮುಟ್ಟುವ […]

View Post

ಕುಮಟಾದ ಟೆನ್ನಿಸ್ ಬಾಲ್

Blogs, Leave a comment

ಟೆನ್ನಿಸ್ ಬಾಲ್ ಒಂಥರಾ ಮಲ್ಟಿಪರ್ಪಸ್ ವಸ್ತು. ಸ್ವೆಟರ್ ಹಾಕುವ ಉಲ್ಲನ್ ಅನ್ನು ಸುತ್ತೋಕೆ ಬಳಸಿಕೊಳ್ಳೋದ್ರಿಂದ ಹಿಡಿದು ಕ್ರಿಕೆಟ್ ಅಂಗಣದಲ್ಲಿನ ಆಟದವರೆಗೆ ಇದರ ಪ್ರಭಾವದ ಹರಿವಿದೆ. ಟೆನ್ನಿಸ್ ಬಾಲ್, ನಮ್ಮಲ್ಲಿ ಟೆನ್ನಿಸ್ ಗಿಂತ ಕ್ರಿಕೆಟ್ ಗೆ ಬಳಕೆಯಾಗೋದೇ ಜಾಸ್ತಿ. ಇದನ್ನು ಪರಿಗಣಿಸಿಯೇ ಕ್ರಿಕೆಟ್ ಆಟಕ್ಕೆ ಬೇಕಾದಂಥ ಗಟ್ಟಿ ಟೆನಿಸ್ ಬಾಲ್ಗಳನ್ನು ಮಾಡುವ ಘಟಕಗಳೇ ಇವೆ. ಭಾರತದಲ್ಲಿ ಮುಖ್ಯವಾಗಿ ಟೆನಿಸ್ ಬಾಲ್ಗಳನ್ನು ತಯಾರಿಸುವುದು ಕೇರಳ, ಮಹಾರಾಷ್ಟ್ರ ಮತ್ತು ಪಂಜಾಬ್ ಗಳಲ್ಲಿ. ಆದರೆ ಅಂತರ್ ರಾಜ್ಯ ಮಟ್ಟದಲ್ಲಿ ಅತಿಹೆಚ್ಚಿನ ಬೇಡಿಕೆಯಿರುವ ಉತ್ತಮ […]

View Post

ಕಲಘಟಗಿಯ ಮರದ ತೊಟ್ಟಿಲು..

Blogs, One comment so far

ಚೊಚ್ಚಲು ಹೆರಿಗೆಯ ನಂತರ ತವರು ಮನೆಯಿಂದ ಗಂಡನ ಮನೆಗೆ ಹೋಗುವವಳಿಗೆ ತೊಟ್ಟಿಲು ಕೊಡುವ ಸಂಪ್ರದಾಯವಿತ್ತು. ಈಗಲೂ ಹಲವೆಡೆಗಳಲ್ಲಿ ಇದೆ. ಈಗ ಎಲ್ಲವೂ ಸ್ವಯಂಚಾಲಿತ ಮತ್ತು ಯಂತ್ರಗಳನ್ನು ಬಳಸಿ ಮಾಡುವ ತೊಟ್ಟಿಲಿನದ್ದೇ ಹೆಚ್ಚು ಮಾರಾಟ. ಜಾಗತೀಕರಣದ ಈ ಓಟದಲ್ಲಿ ಬೇರುಗಳು ಅಲ್ಲಲ್ಲಿ ಉಳಿದು ಹೋಗಿರುತ್ತವೆ. ನೈಸರ್ಗಿಕವಾದ ತೊಟ್ಟಿಲು ಮಾಡುವ ಕಲೆಯನ್ನು ಇನ್ನೂ ಉಳಿಸಿಕೊಂಡು ಬಂದ ಊರು ಧಾರವಾಡ‌‌ ಜಿಲ್ಲೆಯ ಕಲಘಟಗಿ. ಮೊದಲಿಗೆ ಐದಾರು ಮನೆತನಗಳು ತೊಟ್ಟಿಲು ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದವು. ಈಗ ಮೂರ್ನಾಲ್ಕು‌ ಮನೆತನಗಳು‌ ಮಾತ್ರ ಆ ಉದ್ಯೋಗದಲ್ಲಿ ಮುಂದುವರೆದಿವೆ. […]

View Post

ಅಮೀನಗಡದ ಕರದಂಟು

Blogs, One comment so far

‘ಯಾಂವ ಮಾಡ್ಯಾನ ಬಂಟ.. ತಿಂದಷ್ಟು ರುಚಿ ಉಂಟ… ಅಮೀನಗಡ ಕರದಂಟ…’ ಅನ್ನುವ ಜಾನಪದ ಗೀತೆ ಉತ್ತರ ಕರ್ನಾಟಕದಲ್ಲಿದೆ. 1907ರಲ್ಲಿ ಕರದಂಟು ಮೊಟ್ಟಮೊದಲಿಗೆ ತಯಾರಾದ ವರ್ಷ. ಇದನ್ನು ಪ್ರಪ್ರಥಮವಾಗಿ ತಯಾರಿಸಿದವರು ಸಾವಳಿಗೆಪ್ಪಾ ಐಹೋಳ್ಳಿ ಎಂಬ ಅಮೀನಗಡದ ಮೂಲ ನಿವಾಸಿ. ಈ ಕರದಂಟಿನ ವಿಶೇಷತೆಯೆಂದರೆ ಇದು ಯಾವುದೋ ಒಂದು ಕಾಲಘಟ್ಟದಲ್ಲಿ ಇದ್ದಂತೆ ಈಗಲೂ ಇಲ್ಲ. ಕಾಲಮಾನ ಮತ್ತು ಬೇಡಿಕೆಗಳಿಗೆ ತಕ್ಕಂತೆ ಬದಲಾಗುತ್ತಿದೆ. ಬೆಂಗಳೂರಿನಲ್ಲೂ ಈ ಕರದಂಟು ಲಭ್ಯವಾಗುವಷ್ಟು ಮಾರುಕಟ್ಟೆಯನ್ನು ವೃದ್ಧಿಸಿಕೊಂಡಿದೆ. ವಿಜಯಾ ಕರದಂಟು ನಾಮದಡಿಯಲ್ಲಿ ವ್ಯಾಪಾರ ಶುರುಮಾಡಿದೆ. ಕ್ಲಾಸಿಕ್ ಕರದಂಟು, […]

View Post

ಕೊಲ್ಹಾರದ ಕೆನೆಮೊಸರು

Blogs, Leave a comment

ಬಿಜಾಪುರ ಜಿಲ್ಲೆಯ ಕೊಲ್ಹಾರ ಕೆನೆ ಮೊಸರಿನ ಖಣಿ ಅಂತಲೇ ಕರೆಯುತ್ತಾರೆ. ಕೊಲ್ಹಾರದ ಮುಳಗಡೆಗೆ ತುತ್ತಾಗುತ್ತಿರುವ ಪ್ರದೇಶ. ಇಂಥ ಸಂಕಟದ ನಡುವೆಯೂ ಅಲ್ಲಿ ದೊರೆಯುವ ಮೊಸರಿಗೇನೂ ಕುಂದಾಗಿಲ್ಲ. ತಾವು ಕೊಲ್ಹಾರಕ್ಕೊಮ್ಮೆ ಹೋದರೆ ಗಡಿಗೆಗಳಲ್ಲಿ ಕೆನೆ ಮೊಸರಿನ ಮಾರಾಟ ಮಾಡುತ್ತಾರೆ. ಒಂದೇ ಉದ್ಯಮದಲ್ಲಿ ಹೈನುಗಾರಿಕೆ ಮತ್ತು ಕುಂಬಾರಿಕೆ ಎರಡಕ್ಕೂ ಮಾರುಕಟ್ಟೆ ದೊರಕುತ್ತದೆ. ಪ್ಯಾಕ್ ಮಾಡದೇ ಗಡಿಗೆಗಳಲ್ಲಿ ತುಂಬಿ ಮೇಲೊಂದು ಕಾಗದದ ಮುಚ್ಚಳವಿಟ್ಟು ಬಸ್‌ಸ್ಟ್ಯಾಂಡಿನುದ್ದಕ್ಕೂ ಹೈನುಗಾರರು ಮಾರಾಟಕ್ಕೆ ಕೂತಿರುತ್ತಾರೆ. ಮೊಸರಷ್ಟೇ ಅಲ್ಲದೇ ಮೊಸರಿನ ತಿನಿಸುಗಳಾದ ಮೊಸರವಲಕ್ಕಿ, ಮೊಸರನ್ನ, ಪೇಪರ್ ಮೊಸರವಲಕ್ಕಿ, ಮೊಸರ […]

View Post