ನಂಜನಗೂಡು ಹಲ್ಲಿನ ಪುಡಿ

Blogs, View all 5 comments

ನಂಜನಗೂಡು ಮೂಲದ ಬಿ.ವಿ.ಪಂಡಿತರು ಬರೀ ಹಲ್ಲಿನ ಪುಡಿ ಒಂದೇ ಅಲ್ಲ, ಹಲವಾರು ಆಯುರ್ವೇದದ ಔಷಧಿ, ಉತ್ಪನ್ನಗಳನ್ನು ತಯಾರಿಸಿದ್ದಾರೆ. ಅದಷ್ಟೇ ಅಲ್ಲದೇ ಸದ್ವೈದ್ಯ ಶಾಲೆಯನ್ನೂ ಸ್ಥಾಪಿಸಿದ್ದಾರೆ. 1918ರಲ್ಲಿ ಫ್ಲ್ಯೂ ಜ್ವರ ತೀವ್ರವಾಗಿದ್ದಾಗ ಪಂಡಿತರು ತಯಾರಿಸಿದ ಕಸ್ತೂರಿ ಮಾತ್ರೆ ತುಂಬಾ ಪ್ರಸಿದ್ಧವಾಗಿತ್ತು. ನಂಜನಗೂಡಿನಲ್ಲಿ ಇಪ್ಪತ್ತು ವರ್ಷ ಟೆನ್ನಿಸ್ ಕ್ಲಬ್ ನಡೆಸಿದ ಪಂಡಿತರು ಸ್ವತಃ ಒಳ್ಳೆಯ ಫುಟ್ಬಾಲ್ ಆಟಗಾರರಾಗಿದ್ದರು. ಮನೆಯ ಬಡತನ ಸಂದಿಗ್ಧಗಳು ಅವರನ್ನು ಹೊಸದೊಂದು ಉದ್ಯಮ ಶುರುಮಾಡುವಂತಾ ಪರಿಸ್ಥಿತಿಗೆ ತಳ್ಳಿದವು.

1913ರ ಫೆಬ್ರವರಿ ತಿಂಗಳಿನಲ್ಲಿ ನಂಜನಗೂಡಿನ ನಾರಾಯಣ ಅಗ್ರಹಾರದ ತಮ್ಮ ಮನೆಯಲ್ಲಿ ಬಿ.ವಿ.ಪಂಡಿತರು ಮೊಟ್ಟಮೊದಲ ಬಾರಿಗೆ ಭತ್ತದ ಬೂದಿ‌ ಮತ್ತು ಗಿಡಮೂಲಿಕೆಗಳ ಮಿಶ್ರಣದಿಂದ ಹಲ್ಲಿನ ಪುಡಿಯನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟರು. ನಂಜನಗೂಡಿನ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಹೋಮ‌ ನಡೆದ ನಂತರ ಅದರ ಬೂದಿಯಿಂದ ಹಲ್ಲಿನ ಪುಡಿ ತಯಾರಿಸಬಹುದು ಎಂದು ಹೊಳೆದು ಪ್ರಯತ್ನ ಪಟ್ಟ ಫಲವೇ ನೂರು ವರ್ಷಗಳ ಒಂದು ಉದ್ದಿಮೆಗೆ ಚಾಲನೆ ಸಿಕ್ಕಿತು. ನಂಜನಗೂಡಿನ ಹಲ್ಲುಪುಡಿಗೆ ಒಂದಾಣೆ ಹಲ್ಲಿನ ಪುಡಿಯಂತಲೂ ಕರೆಯುತ್ತಾರೆ. ಪಂಡಿತರು ಕೊಟ್ಟ ಹೆಸರು “ನಂಜನಗೂಡು ದಂತಧಾವನ ಚೂರ್ಣ” ಅಂತ. ಬಿ.ವಿ. ಪಂಡಿತರ ಮಕ್ಕಳು ಮಾರುಕಟ್ಟೆಯ ನಿರ್ವಹಣೆ ಮಾಡುತ್ತಿದ್ದರು.

1975ರಲ್ಲಿ ಪಂಡಿತರ ಮರಣದ ನಂತರ ವ್ಯಾಪಾರ ಕುಸಿಯಿತು. ಆಯುರ್ವೇದೇತರ ಹಲ್ಲಿನ ಪುಡಿ, ಪೇಸ್ಟ್ ಬಂದ ಮೇಲೆ ದೇಸಿ ಹಲ್ಲಿನ ಪುಡಿಯ ವ್ಯಾಪಾರ ಗಣನೀಯವಾಗಿ ಕುಸಿದು ಹೋದರೂ ಭತ್ತದ ಬೂದಿಯಿಂದಲೇ ಇವತ್ತೂ ಹಲ್ಲಿನ ಪುಡಿಯನ್ನು ತಯಾರಿಸುತ್ತಾರೆ. ಮಾರುಕಟ್ಟೆಯ ಬೇಡಿಕೆಗನುಗುಣವಾಗಿ ಇತ್ತೀಚೆಗೆ ಪೇಸ್ಟ್‌ನ ತಯಾರಿಕೆಯನ್ನೂ ಮಾಡಿಕೊಂಡು ಬರುತ್ತಿದ್ದಾರೆ. ಬೆಳಿಗ್ಗೆ, ರಾತ್ರಿ ಈ ಪುಡಿಯಿಂದ ಹಲ್ಲುಜ್ಜುವುದರಿಂದ ಒಸಡು ನೋವು ಹೋಗುವುದಲ್ಲದೇ ಹಲ್ಲಿನ ಕಲೆಗಳು ಹೋಗುತ್ತವೆ. ಮುಂಚಿನ ಹಾಗೆ ಮಾರುಕಟ್ಟೆ ಇಲ್ಲದೇ ಹೋದರೂ ಈಗಲೂ ಹಲ್ಲಿನ ಪುಡಿಗೆ ಒಳ್ಳೆಯ ಬೇಡಿಕೆ ಇದೆ.

Etiam euismod iaculis urna venenatis rutrum commodo enim. Vivamus tinci dunt leo vel arcu elnd pulvinar tellus.

5 comments

 • Mahadeva R July 21st, 2020

  ದೇಶದ ಹಿರಿಮೆಗಾಗಿ ದೇಶ ಉಳಿಸಿ ಸ್ವದೇಶಿ ಬಳಸಿ

 • S P Noolvi July 23rd, 2020

  Super to know that your still supply this in the market… 🌷👌

 • S P Noolvi July 23rd, 2020

  Super to know that your still supply this in the market… 🌷👌

 • Dr. I . Surya Prakash August 15th, 2020

  I was so nostalgic to see the packet of BV pundits Nanjangood Dant choorna packet which was quite common during younger days. Probably every household use to have it…listed for atma nirbhar bharat program.

 • Rupesh August 23rd, 2020

  ಇಂದಿಗೂ ಇದರ ರುಚಿ ಅಚ್ಚುಮೆಚ್ಚು ಬೆಂಗಳೂರಿನಲ್ಲಿ ಸಾಕಷ್ಟು ಹುಡುಕಿದರೂ ದೋರೆಯಲಿಲ್ಲ ಆದರೆ ತಮಿಳುನಾಡಿನ ತಿರುಚಿಲ್ಲಿ ಸಿಕ್ಕಿದ್ದು ನೆನಪು…ಈಗ ಕಾಲಚಕ್ರ ತಿರುಗಿ ಬಂದಿದೆ ರಾಸಾಯನಿಕ ಅಂಶಗಳಿಂದ ಜನ ಎಚೆತ್ತುಕೋಂಡಿದ್ದಾರೆ ದೇಸಿ ರಾಸಾಯನಿಕ ರಹಿತ ಉತ್ಪನ್ನಗಳ ಬೇಡಿಕೆ ಹೆಚ್ಚಾಗುತ್ತಿದೆ.

Leave A Reply